Mysore Dasara 2017: Dasara Special Tips for cleaning puja room for Navaratri | Oneindia Kannada

2017-09-23 15

In Hindu mythology, God will only visit a house which is clean, kept tidy and has positivity. So, if you are celebrating Navratri or Durga Puja, here are few cleaning tips to prepare your home for the upcoming festival. Apart from cleaning the overall house, it is very important to clean the Puja room. As Navratri has come closer, here are few tips to clean your Puja room and prepare for Navratri.

ನೋಡನೋಡುತ್ತಿದ್ದಂತೆ ಮತ್ತೆ ನವರಾತ್ರಿ ಬಂದೇ ಬಿಟ್ಟಿದೆ. ತಾಯಿ ದುರ್ಗೆಯ ಪೂಜೆಗೆ ಒಂಭತ್ತು ದಿನಗಳನ್ನು ಮೀಸಲಿಡುವಂತಹ ನವರಾತ್ರಿ ವೇಳೆ ಹಲವಾರು ವಿಧದ ಕಾರ್ಯಕ್ರಮಗಳು ನಡೆಯುವುದು. ಮನೆಯಲ್ಲಿ ದುರ್ಗೆಯ ಮೂರ್ತಿ ತಂದು ಆರಾಧಿಸಲು ಪ್ರತಿಯೊಬ್ಬರು ಕಾತರದಿಂದ ಇದ್ದಾರೆ. ದುರ್ಗಾ ಪೂಜೆಗಳು ಸಾರ್ವಜನಿಕವಾಗಿ ನಡೆಯುವುದು ಹೆಚ್ಚಾದರೂ ಕೆಲವೊಂದು ಕಡೆ ಮನೆಗೆ ತಂದು ದುರ್ಗೆಯ ಮೂರ್ತಿಗೆ ಪೂಜೆ ಮಾಡಲಾಗುವುದು. ದುರ್ಗೆಯ ಮೂರ್ತಿಯ ಮನೆಗೆ ತರುವ ಮೊದಲು ಮನೆಯನ್ನು ಅಲಂಕರಿಸುವುದು ಅತೀ ಅಗತ್ಯ. ಇದಕ್ಕೆ ಮೊದಲು ಮನೆಯನ್ನು ಸ್ವಚ್ಛಗೊಳಿಸಿ, ಬಣ್ಣಬಳಿದು ಶೃಂಗರಿಸಬೇಕು. ಯಾಕೆಂದರೆ ಸ್ವಚ್ಛತೆಯಿಲ್ಲದೆಡೆ ದೇವರು ಕೂಡ ಬರುವುದಿಲ್ಲ. ಸಂಪೂರ್ಣ ಮನೆಯನ್ನು ಸ್ವಚ್ಛಗೊಳಿಸುವುದರೊಂದಿಗೆ ಪೂಜೆಯ ಮನೆಯನ್ನು ಸ್ವಚ್ಛಗೊಳಿಸುವುದು ಹೇಗೆ ಎಂದು ನಿಮಗೆ ಈ ವೀಡಿಯೋದಲ್ಲಿ ಹೇಳಿಕೊಡಲಾಗಿದೆ